ಸ್ವರ್ಣಕುಂಭ ವಿವಿದೊದ್ದೇಶ ಸಹಕಾರಿ ಸಂಘ (ನಿ) ಸುರತ್ಕಲ್ ಸಹಕಾರಿ ಸಂಘದ ನೂತನ ಆಡಳಿತ ಮಂಡಳಿಯ ಆಯ್ಕೆ

ಸ್ವರ್ಣಕುಂಭ ವಿವಿದೊದ್ದೇಶ ಸಹಕಾರಿ ಸಂಘ (ನಿ) ಸುರತ್ಕಲ್ ಸಹಕಾರಿ ಸಂಘದ ನೂತನ ಆಡಳಿತ ಮಂಡಳಿಯ ಆಯ್ಕೆ

ಸ್ವರ್ಣಕುಂಭ ವಿವಿದೊದ್ದೇಶ ಸಹಕಾರಿ ಸಂಘ (ನಿ) ಸುರತ್ಕಲ್ ಇದರ 5 ವರ್ಷದ ಅವಧಿಯ ಆಡಳಿತ ಮಂಡಳಿ ಅಧ್ಯಕ್ಷ ಉಪಾಧ್ಯಕ್ಷರ ಹಾಗೂ ನಿರ್ದೇಶಕರ ಆಯ್ಕೆ ಪ್ರಕ್ರಿಯೆ ದಿನಾಂಕ 24/01/2026 ರಂದು ಚುನಾವಣಾಧಿಕಾರಿ ಶ್ರೀ ನಾಗೇಂದ್ರ ಇವರ ಸಮ್ಮುಖದಲ್ಲಿ ಸಂಘದ ಕೇಂದ್ರ ಕಚೇರಿ ಯಲ್ಲಿ ನಡೆಯಿತು… ದಿನಾಂಕ 09/01/2026ರಂದು ಎಲ್ಲಾ ನಿರ್ದೇಶಕ ರ ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿದ್ದು. ಇಂದಿನ ಅಧ್ಯಕ್ಷ ಉಪಾಧ್ಯಕ್ಷ ಹುದ್ದೆಗೆ ನಡೆದ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಶ್ರೀ ನಾಗೇಶ್ ಕುಲಾಲ್ ಹಾಗೂ ಉಪಾಧ್ಯಕ್ಷರಾಗಿ ಶ್ರೀ ಮಾಧವ ಬಂಗೇರ ಇವರನ್ನು ಸರ್ವನುಮತದಿಂದ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ನಿರ್ದೇಶಕರಾದ, ಶ್ರೀ ಮುದ್ದು ಮೂಲ್ಯ, ಶ್ರೀ ಭೋಜ ಬಂಗೇರ, ಶ್ರೀ ಮೋಹನ್ ಐ, ಶ್ರೀ ಗಂಗಾಧರ ಬಂಜನ್, ಶ್ರೀ ವಾಸು ಬಂಜನ್, ಶ್ರೀ ಮತಿ ಲೀಲಾ ಬಂಜನ್, ಶ್ರೀಮತಿ ಉಷಾ R ಬಂಗೇರ, ಶ್ರೀಮತಿ ಮಮತಾ ಗಣೇಶ್, ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀ ಸಂಜೀವ ಮೂಲ್ಯ ಉಪಸ್ಥಿತರಿದ್ದರು.
ಆಯ್ಕೆಯಾದ ಎಲ್ಲಾ ನಿರ್ದೇಶಕರಿಗೆ ಚುನಾವಣಾ ಧಿಕಾರಿ ಶ್ರೀ ನಾಗೇಂದ್ರ ಇವರು ಪ್ರಮಾಣ ಪತ್ರ ನೀಡಿ ಶುಭ ಹಾರೈಸಿದರು.



Leave a Reply